ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳು ಮಾರ್ಚ್ 22 ರಂದು ರಾಜ್ಯ ಬಂದ್‌ಗೆ ಕರೆ ನೀಡಿವೆ. ಈ ಬಂದ್‌ಗೆ ಹಲವಾರು ಸಂಘಟನೆಗಳು ನೈತಿಕ ಹಾಗೂ ಬಾಹ್ಯ ಬೆಂಬಲ ವ್ಯಕ್ತಪಡಿಸಿದ್ದು, ಜನಜೀವನದ ಮೇಲೆ ಇದರ ಪರಿಣಾಮವಿರುವ ಸಾಧ್ಯತೆ ಇದೆ. ಆದರೆ, ಶಾಲೆಗಳು, ಕಾಲೇಜುಗಳು, ಸಾರಿಗೆ ಸೇವೆಗಳು ಸಹಜ ಸ್ಥಿತಿಯಲ್ಲಿಯೇ ಇರಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬಂದ್ ಹಿಂದಿನ ಕಾರಣವೇನು?
ಇತ್ತೀಚೆಗೆ ಮಹಾರಾಷ್ಟ್ರದ ಕೆಲವು ಮರಾಠಿ ಗುಂಪುಗಳು ಕರ್ನಾಟಕದ ಕನ್ನಡಿಗರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಗಳು ವರದಿಯಾಗಿದೆ. ಈ ಪ್ರಕರಣಗಳನ್ನು ಖಂಡಿಸಿ ಹಾಗೂ ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಲು ಕನ್ನಡಪರ ಸಂಘಟನೆಗಳು ಬಂದ್‌ಗೆ ಮುಂದಾಗಿವೆ. ಈ ಹೋರಾಟಕ್ಕೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವ ನೀಡುತ್ತಿದ್ದಾರೆ.
ಜನಜೀವನದ ಮೇಲೆ ಬಂದ್‌ನ ಪರಿಣಾಮ ಏನು?
ಜನರು ಬಂದ್‌ನ ಪರಿಣಾಮದ ಬಗ್ಗೆ ಆತಂಕಗೊಂಡಿದ್ದಾರೆ. ಮಾರ್ಚ್ 22 ಶನಿವಾರ ಬಂದ್ ಘೋಷಿಸಲಾಗಿದೆ ಎಂಬ ಕಾರಣಕ್ಕೆ ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳು, ಸಾರಿಗೆ, ಮೆಟ್ರೋ, ಮಾರುಕಟ್ಟೆ, ಹೋಟೆಲ್, ಆಸ್ಪತ್ರೆಗಳ ಸ್ಥಿತಿ ಹೇಗಿರಲಿದೆ ಎಂಬುದು ಜನರಲ್ಲಿ ಕುತೂಹಲ ಮೂಡಿಸಿದೆ.
ಶಾಲೆ-ಕಾಲೇಜುಗಳಿಗೆ ರಜೆ ಇದೆಯಾ?
ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (CAMPS) ಈ ಬಂದ್‌ಗೆ ನೈತಿಕ ಬೆಂಬಲ ನೀಡಿದೆ. ಆದರೆ ಶಾಲೆ-ಕಾಲೇಜುಗಳಿಗೆ ಯಾವುದೇ ರಜೆ ಇರುವುದಿಲ್ಲ. ರಾಜ್ಯದ ಬಹುತೇಕ ಶಾಲೆಗಳಲ್ಲಿ ಪರೀಕ್ಷೆಗಳ ಅವಧಿ ಆಗಿರುವುದರಿಂದ, ಬಂದ್‌ನ ಬೆಂಬಲವನ್ನು ನೀಡಲಾಗದು ಎಂದು CAMPS ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.
ಸರ್ಕಾರಿ ಕಚೇರಿಗಳ ಸ್ಥಿತಿ
ಕರ್ನಾಟಕ ಬಂದ್: ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಇದೆಯಾ? ಸೇವೆಗಳ ಸ್ಥಿತಿ ಹೇಗೆ?
ಮಾರ್ಚ್ 22ರಂದು ನಾಲ್ಕನೇ ಶನಿವಾರವಾಗಿರುವುದರಿಂದ ಬಹುತೇಕ ಸರ್ಕಾರಿ ಕಚೇರಿಗಳಿಗೆ ರಜೆ ಇರಲಿದೆ. ಆದರೆ, ಅಗತ್ಯ ಸೇವೆಗಳಾದ ಆಸ್ಪತ್ರೆ, ಪತ್ತೆ ಚೀಟಿಗಳ ಕಚೇರಿ, ಪಡಿತರ ಅಂಗಡಿಗಳು, ಅಗ್ನಿ ಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ಕೆಲವೆಡೆ ಕಚೇರಿಗಳು ಕಾರ್ಯನಿರ್ವಹಿಸಲಿದೆ.
ಸಾರ್ವಜನಿಕ ಸಾರಿಗೆ ಸೇವೆಗಳು ಎಂದಿನಂತೆ
ಬಿಎಂಟಿಸಿ (BMTC), ಕೆಎಸ್‌ಆರ್‌ಟಿಸಿ (KSRTC), ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಎಂದಿನಂತೆ ಸಂಚಾರ ನಡೆಸಲಿವೆ. ಸರ್ಕಾರದಿಂದ ಬೆಂಬಲ ಇಲ್ಲದ ಕಾರಣ ಸಾರಿಗೆ ಸೇವೆಗಳ ಮೇಲೆ ಯಾವುದೇ ವ್ಯತ್ಯಯ ಉಂಟಾಗುವ ಸಾಧ್ಯತೆ ಕಡಿಮೆ.
ಬಂದ್‌ಗೆ ಬೆಂಬಲ ನೀಡಿದ ಸಂಘಟನೆಗಳು
ಬಂದ್‌ಗೆ ಹಲವು ಕನ್ನಡ ಪರ ಹಾಗೂ ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಅವುಗಳೆಂದರೆ:
• ರೂಪೇಶ್ ರಾಜಣ್ಣ ಬಣ
• ಬೆಂಗಳೂರು ಆಟೋ ಸೇನೆ
• ಓಲಾ-ಉಬರ್ ಚಾಲಕರ ಸಂಘ
• ಶಿವರಾಮೇಗೌಡ ಬಣ
• ಜಯಭಾರತ್ ಚಾಲಕರ ಸಂಘ
• ಕರ್ನಾಟಕ ಜನಪರ ವೇದಿಕೆ
• ಆದರ್ಶ ಆಟೋ ಯೂನಿಯನ್
• ಗೂಡ್ಸ್ ಚಾಲಕರ ಸಂಘ
• ಕರವೇ ಗಜಕೇಸರಿ ಸೇನೆ
• ಡಾ.ರಾಜ್ ಕುಮಾರ್ ಅಭಿಮಾನಿ ಸಂಘ
• ವೀರ ಕನ್ನಡಿಗರ ಸೇನೆ
• ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು
ಯಾವ ಸೇವೆಗಳು ಲಭ್ಯವಿರುತ್ತವೆ?
ಬಂದ್‌ನಲ್ಲಿಯೂ ಈ ಸೇವೆಗಳು ಎಂದಿನಂತೆ ಲಭ್ಯವಿರಲಿದೆ:
✅ ನಮ್ಮ ಮೆಟ್ರೋ
✅ ಬಿಎಂಟಿಸಿ ಬಸ್ ಸೇವೆ
✅ ಕೆಎಸ್‌ಆರ್‌ಟಿಸಿ ಬಸ್ ಸೇವೆ
✅ ಶಾಲಾ-ಕಾಲೇಜುಗಳು (ರಜೆ ಇಲ್ಲ)
✅ ಮಾರುಕಟ್ಟೆಗಳು ಮತ್ತು ಅಂಗಡಿಗಳು
✅ ಆಸ್ಪತ್ರೆ, ವೈದ್ಯಕೀಯ ಸೇವೆಗಳು
✅ ಹೋಟೆಲ್, ಉಪಹಾರ ಮಂದಿರಗಳು
✅ ಬಾರ್, ರೆಸ್ಟೋರೆಂಟ್, ಪಬ್‌ಗಳು
ಯಾವ ಸೇವೆಗಳು ಲಭ್ಯವಿರುವುದಿಲ್ಲ?
❌ ಓಲಾ-ಊಬರ್, ಆಟೋ ಸೇವೆ ವ್ಯತ್ಯಯವಾಗುವ ಸಾಧ್ಯತೆ
❌ ಸಿನಿಮಾ ಮಂದಿರಗಳಲ್ಲಿ ಬೆಳಗಿನ ಶೋ ಇರದು
ಕರ್ನಾಟಕ ರಕ್ಷಣಾ ವೇದಿಕೆಯ (KRV) ನಿರ್ಧಾರ
ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಈ ಬಂದ್‌ಗೆ ಬೆಂಬಲ ನೀಡಿಲ್ಲ. “ನಾವು ಈ ಬಂದ್‌ನಲ್ಲಿ ಪಾಲ್ಗೊಳ್ಳುವುದಿಲ್ಲ. ಕನ್ನಡಿಗರ ಮೇಲೆ ದೌರ್ಜನ್ಯ ಮಾಡುವವರ ವಿರುದ್ಧ ತೀವ್ರ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ. ಆದರೆ ಬಂದ್ ಅವಶ್ಯಕವಿಲ್ಲ” ಎಂದು ಅವರು ತಿಳಿಸಿದ್ದಾರೆ.
ನೈತಿಕ ಬೆಂಬಲ ನೀಡಿದ ಸಂಘಟನೆಗಳು
ಕೆಲವು ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿವೆ:
• ಹೋಟೆಲ್ ಮಾಲೀಕರ ಅಸೋಸಿಯೇಶನ್
• ರಾಜ್ಯ ಬಸ್ ಮಾಲೀಕರ ಸಂಘ
• ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್
• ಓಲಾ-ಉಬರ್ ಚಾಲಕರು ಮತ್ತು ಮಾಲೀಕರ ಒಕ್ಕೂಟ
• ಸಾರಥಿ ಆಟೋ ಚಾಲಕರ ಸಂಘ
• ಖಾಸಗಿ ಶಾಲೆಗಳು






0 ಕಾಮೆಂಟ್‌ಗಳು